ಟೆಂಪ್ಲೇಟು:-- ಬೋಹೀಮಿಯನಿಸಂ ಎಂಬುದು ಸ್ವತಂತ್ರವಾದ (ಸಂಪ್ರದಾಯಬದ್ಧವಲ್ಲದ)ಜೀವನಶೈಲಿ ಪದ್ಧತಿಯಾಗಿದೆ. ಇದು ಕೆಲವು ಶಾಶ್ವತ ಸಂಬಂಧಗಳೊಂದಿಗೆ ಸಂಗೀತಮಯ,ಕಲಾತ್ಮಕ ಅಥವಾ ಸಾಹಿತ್ಯಿಕ್ಕೆ ಮನರಂಜನೆಗಳಲ್ಲಿ ತೊಡಗಿರುವ ಸಮಾನ ಮನೋಧರ್ಮದ ಜನರ ಸಮಾರಂಭ ಕೂಟಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಈ ಪ್ರಕರಣದಲ್ಲಿ ಬೋಹೀಮಿಯನ್ ಗಳು ಅಲೆಮಾರಿಗಳಾಗಿರಬಹುದು, ಸಾಹಸಿಗರಾಗಿರಬಹುದು ಅಥವಾ ಪೋಲಿಗಳಾಗಿರಬಹುದು. ಬೋಹೀಮಿಯನ್ ಪದದ ಈ ಬಳಕೆಯು, ಯುರೋಪಿನ ಅನೇಕ ಪ್ರಧಾನ ನಗರಗಳಲ್ಲಿರುವ ಅಪ್ರಧಾನವಾದ ಮತ್ತು ಬಡ ಕಲಾವಿದರು, ಬರಹಗಾರರು, ಪತ್ರಿಕೋದ್ಯಮಿಗಳು, ಸಂಗೀತಗಾರರು ಮತ್ತು ನಟರ ಸಂಪ್ರದಾಯಬದ್ಧವಲ್ಲದ ಜೀವನ ಶೈಲಿಯನ್ನು ವಿವರಿಸಲು ಮೊಟ್ಟ ಮೊದಲನೆಯ ಬಾರಿಗೆ ಆಂಗ್ಲ ಭಾಷೆಯಲ್ಲಿ 19 ನೇ ಶತಮಾನದಲ್ಲಿ ಕಾಣಿಸಿಕೊಂಡಿತು. ಬೋಹೀಮಿಯಯನ್ ಗಳು, ಸಂಪ್ರದಾಯಬದ್ಧವಲ್ಲದ ಅಥವಾ ಕಾನೂನುಬಾಹಿರವಾದ, ರೂಢ ವ್ಯವಸ್ಥೆಯಲ್ಲದ ರಾಜಕೀಯ ಅಥವಾ ಸಾಮಾಜಿಕ ದೃಷ್ಟಿಕೋನದೊಂದಿಗೆ ಸಂಬಂಧಿಸಿರುತ್ತಾರೆ. ಇದನ್ನು ಅವರು ಹೆಚ್ಚಾಗಿ ಮುಕ್ತ ಪ್ರೇಮ, ಮಿತವ್ಯಯ, ಮತ್ತು/ಅಥವಾ ಸರಳ ಜೀವನದ ಮೂಲಕ ವ್ಯಕ್ತಪಡಿಸುತ್ತಾರೆ. ಬೋಹೀಮಿಯನಿಸಂ ಎಂಬ ಪದವು ಫ್ರಾನ್ಸ್ ನಲ್ಲಿ 19 ನೇ ಶತಮಾನದ ಪೂರ್ವಾರ್ಧದಲ್ಲಿ ಬೆಳಕಿಗೆ ಬಂದಿತು. ಇಲ್ಲಿನ ಕಲಾವಿದರು ಮತ್ತು ಸೃಷ್ಟಿಕರ್ತರು ಕಡಿಮೆ ಬಾಡಿಗೆಯ, ಕೆಳವರ್ಗದ, ರೋಮನಿ ಜನರ ಪಕ್ಕದಲ್ಲಿ ಬದುಕುವುದರ ಬಗ್ಗೆ ಗಮನಹರಿಸಲು ಪ್ರಾರಂಭಿಸಿದಾಗಿನಿಂದ ಈ ಪದ ಹುಟ್ಟಿಕೊಂಡಿತು. ಬೋಹೀಮಿಯನ್ ಎಂಬುದು ಫ್ರಾನ್ಸ್ ನ ರೋಮನಿ ಜನರಿಗೆ ಬಳಸುವಂತಹ ಸಾಮಾನ್ಯ ಪದವಾಗಿದೆ. ಇವರು ಬೋಹೆಮಿಯಾದ (ಮಾರ್ಗದ) ಮೂಲಕ ಪಶ್ಚಿಮ ಯುರೋಪ್ ಅನ್ನು ತಲುಪಿದವರು. == ಬೋಹೀಮಿಯನಿಸಂ ನ ಮೂಲ == ಸಾಹಿತ್ಯಿಕ ಬೋಹೀಮಿಯಯನ್ ಗಳು ಫ್ರೆಂಚ್ ನ ಕಲ್ಪನೆಯಲ್ಲಿ, ಅಲೆಮಾರಿ ರೋಮನಿಗಳೊಂದಿಗೆ (ಅವರು ಬೋಹೆಮಿಯ ದಿಂದ ಬಂದವರು ಎಂಬ ನಂಬಿಕೆಯಿಂದಾಗಿ ಅವರನ್ನು ಬೋಹೀಮಿಯಯನ್ ಗಳು ಎಂದು ಕರೆಯಲಾಗುತ್ತಿತ್ತು ), ಸಾಂಪ್ರದಾಯಬದ್ಧವಾದ ಸಮುದಾಯವನ್ನು ಹೊರತುಪಡಿಸಿ ಹೊರಗಿನಿಂದ ಬಂದವರೊಡನೆ ಮತ್ತು ಈ ಸಮುದಾಯದ ಅಸಮ್ಮತಿಯಿಂದ ತೊಂದರೆ ಪಡದವರೊಂದಿಗೆ ಸಂಬಂಧಿಸಿದ್ದಾರೆ. ಈ ಪದವು ನಿಗೂಢ ಜ್ಞಾನೋದಯದ ಸೂಚನೆಯನ್ನು ನೀಡುತ್ತದೆ (ಫಿಲಿಸ್ಟೈಯನ್(ಸಂಸ್ಕೃತಿ ವೈರಿ) ರಿಗೆ ವಿರುದ್ಧವಾಗಿ). ಅಲ್ಲದೇ ವೈಯಕ್ತಿಕ ಆರೋಗ್ಯದ ಬಗ್ಗೆ ಮತ್ತು ವೈವಾಹಿಕ ನಿಷ್ಠೆಯ ಬಗ್ಗೆ ಅಸಡ್ಡೆ ತೋರಿಸುವಂತಹ ಹೀನಾರ್ಥದ ಸೂಚನೆಯನ್ನು ಕೂಡ ಕೊಡುತ್ತದೆ. ಸೆವಿಲ್ಲೆಯಲ್ಲಿ ನಡೆದ ಫ್ರೆಂಚ್ ಗೀತನಾಟಕ ಕಾರ್ಮೆನ್ ನಲ್ಲಿ ಸ್ಪ್ಯಾನಿಷ್ ರೋಮನಿಯನ್ನು ಮೈಲ್ಹ್ಯಾಕ್ ಮತ್ತು ಹ್ಯಾಲ್ವೀಸ್ ಲಿಬ್ರೆಟೊದಲ್ಲಿ(1875) ಬೋಹೀಮಿನೆನ್ ಎಂದು ಸೂಚಿಸಲಾಗಿದೆ. ಹೆನ್ರಿ ಮರ್ಜರ್ ನ ಸೀನ್ಸ್ ಡೆ ಲಾ ವಿಯ ದೆ ಬೊಹೆಮೆ ಎಂಬ ಸಣ್ಣ ಕಥೆಗಳ ಸಂಗ್ರವನ್ನು ( ಬೋಹೀಮಿಯನ್ ಜೀವನದ ದೃಶ್ಯಗಳು ), 1845 ರಲ್ಲಿ ಪ್ರಕಟಿಸಲಾಯಿತು. ಅಲ್ಲದೇ ಬೋಹೆಮಿಯವನ್ನು ವೈಭವಿಕರಿಸಲು ಮತ್ತು ಸಮರ್ಥಿಸಲು ಈ ಪುಸ್ತಕವನ್ನು ಬರೆಯಲಾಗಿತ್ತು. ಮರ್ಜರ್ ನ ಸಂಗ್ರಹವನ್ನು ಗೈಕೊಮೊ ಪುಸಿನಿ ಯವರ ಒಪೇರವಾದಂತಹ ಲಾ ಬೋಹೆಮೆ (1896) ಎಂಬ ಗೀತನಾಟಕದ ಆಧಾರದ ಮೇಲೆ ರೂಪಿಸಲಾಗಿದೆ. (ಪುಸಿನಿಯವರ ನಾಟಕವು, ಜೊನಾಥನ್ ಲಾರ್ಸನ್ ನ ಮ್ಯೂಸಿಕಲ್ ರೆಂಟ್ ಗೆ ಮತ್ತು ಅನಂತರದ ರೆಂಟ್ ಸಿನಿಮಕ್ಕೆ ಮೂಲ ವಸ್ತುವಾಯಿತು. ಪುಸಿನಿಯಂತೆ, ಲಾರ್ಸನ್ ಕೂಡ ದಟ್ಟವಾದ ಪಟ್ಟಣ ಪ್ರದೇಶದಲ್ಲಿ ಬೋಹೀಮಿಯನ್ ನ ಅನ್ಯಾವೃತಭಾಗವನ್ನು ಪರಿಶೋಧಿಸಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ 20 ನೇ ಶತಮಾನದ ಉತ್ತರಾರ್ಧದಲ್ಲಿ ನ್ಯೂಯಾರ್ಕ್ ನಗರವನ್ನು ಕಾಣಬಹುದಾಗಿದೆ. ಪ್ರದರ್ಶನವು, "ಲಾ ವಿಯಾ ಬೋಹೆಮೆ" ಎಂಬ ಹಾಡನ್ನು ಒಳಗೊಂಡಿತ್ತು. ಇದು ಆಧುನಿಕೊತ್ತರ ಬೋಹೀಮಿಯನ್ ಸಂಸ್ಕೃತಿಯನ್ನು ಪ್ರಶಂಸಿಸಿತು.) ಇದೇ ಅರ್ಥದಲ್ಲಿ ಬೋಹೀಮಿಯನ್ ಪದವನ್ನು ಇಂಗ್ಲೀಷ್ ಭಾಷೆಯಲ್ಲಿ , 1848 ರಲ್ಲಿ ಪ್ರಕಟಿಸಲಾದ ವಿಲಿಯಂ ಮೇಕ್ ಪೀಸ್ ಠ್ಯಾಕರೆ ಯವರ ವ್ಯಾನಿಟಿ ಫೇರ್ ಎಂಬ ಕಾದಂಬರಿಯಲ್ಲಿ ಆರಂಭಿಕವಾಗಿ ಪ್ರಸಿದ್ಧಗೊಳಿಸಲಾಯಿತು. ಪರ್ಯಾಯ ಜೀವನ ಶೈಲಿಯನ್ನು ಎಲ್ಲರು ಭಾವಿಸಿರುವಂತೆ ಕಲಾವಿದರು ತಂದರೆಂಬ ಸಾರ್ವಜನಿಕ ಗ್ರಹಿಕೆಗೆ, ಮುಂದೆ ಜಾರ್ಜ್ ಡು ಮೌರಿಯರ್ ರವರು ಬೋಹೀಮಿಯನ್ ಸಂಸ್ಕೃತಿಯ ಬಗ್ಗೆ ಬರೆದ ಅತ್ಯಂತ ರೋಮಾಂಚಕಾರಿಯಾದ ಮತ್ತು ಉತ್ತಮವಾಗಿ ಮಾರಟವಾದ ಟ್ರಿಲ್ಬಿ (1894) ಎಂಬ ಕಾದಂಬರಿಯಿಂದ ಒಂದು ರೂಪದೊರೆಯಿತು. ಕಾದಂಬರಿಯು, ಪ್ಯಾರಿಸ್ ನ ಕಲಾವಿದರ ನಿವಾಸದಲ್ಲಿರುವ ಗಡಿಪಾರುಮಾಡಲಾದ ಮೂರು ಜನ ಇಂಗ್ಲೀಷ್ ಕಲಾವಿದರನ್ನು, ಅವರ ಐರಿಷ್ ಮಾದರಿಯನ್ನು, ಮತ್ತು ಪೂರ್ವ ಯುರೋಪಿನ ಅತ್ಯಂತ ವರ್ಣರಂಜಿತರಾದ ಇಬ್ಬರು ಸಂಗೀತಕಾರರನ್ನು ಚಿತ್ರಿಸುತ್ತದೆ. ಸ್ಪ್ಯಾನಿಷ್ ಸಾಹಿತ್ಯದಲ್ಲಿ, ಬೋಹೀಮಿಯನ್ ಪ್ರವೃತ್ತಿಯನ್ನು ರಾಮಾನ್ ಡೆಲ್ ವ್ಯಾಲೆ-ಇನ್ ಕ್ಲ್ಯಾನ್ ರವರ ಲ್ಯುಸೆಸ್ ಡೆ ಬೋಹೆಮಿಯ ಎಂಬ ನಾಟಕದಲ್ಲಿ ನೋಡಬಹುದಾಗಿದೆ.(ಬೋಹೀಮಿಯನ್ ಬೆಳಕುಗಳು ), ಇದನ್ನು 1920 ರಲ್ಲಿ ಪ್ರಕಟಿಸಲಾಯಿತು. === ಅಮೇರಿಕದ ಬೋಹೀಮಿಯನಿಸಂ === 1845 ರಲ್ಲಿ, ಬೋಹೀಮಿಯನ್ ಜನಾಂಗದವರು ಅಮೇರಿಕ ಸಂಯುಕ್ತ ಸಂಸ್ಥಾನಕ್ಕೆ ವಲಸೆ ಹೋಗಲು ಪ್ರಾರಂಭಿಸಿದರು. 1848 ರಿಂದ ಕೆಲವೊಂದು ಮೂಲ ಸ್ವರೂಪಗಳು ಮತ್ತು ಹಿಂದೆ ಇದ್ದ ಪಾದ್ರಿಗಳನ್ನು ಒಳಗೊಂಡಂತೆ ಆಂದೋಲಗಳು ಪ್ರಾರಂಭವಾದವು. ಇವರು ಸಾಂಪ್ರದಾಯಬದ್ಧ ಸರ್ಕಾರ ಬೇಕೆನ್ನುತ್ತಿದ್ದರು. 1857 ರಲ್ಲಿ ನ್ಯೂಯಾರ್ಕ್ ನಗರದಲ್ಲಿ ಸುಮಾರು 15 ರಿಂದ 20 ಸುಸಂಸ್ಕೃತ ಯುವ ಪತ್ರಿಕೋದ್ಯಮಿಗಳು 1860 ರಲ್ಲಿ ಅಮೇರಿಕದ ಅಂತಃಕಲಹ ಪ್ರಾರಂಭವಾಗುವವರೆಗು ಸ್ವಯಂ ವರ್ಣಿತ "ಬೋಹೀಮಿಯಯನ್ ಗಳಂತೆ" ತೋರಿಸಿಕೊಂಡರು. ಇತರ ನಗರಗಳಲ್ಲಿ ಇಂತಹ ಗುಂಪುಗಳು ಒಡೆದುಹೋದವು —ವರದಿಗಾರರು ಯುದ್ಧದ ಮೇಲೆ ವರದಿ ಮಾಡಲು ಚೆದುರಿಹೋದರು. ಯುದ್ಧದ ಸಂದರ್ಭದಲ್ಲಿ, ಸುದ್ಧಿಗಾರರು "ಬೋಹೀಮಿಯನ್" ಎಂಬ ಹೆಸರನ್ನು ಹೊಂದಲು ಪ್ರಾರಂಭಿಸಿದರು ಹಾಗು ಪತ್ರಿಕೋದ್ಯಮಿಗಳು ಸಾರ್ವತ್ರಿಕವಾಗಿ ಈ ಹೆಸರನ್ನು ಪಡೆದುಕೊಂಡರು. "ಬೋಹೀಮಿಯನ್" ಪದವು "ವೃತ್ತಪತ್ರಿಕೆ ಬರಹಗಾರ" ಎಂಬ ಪದದ ಸಮಾನಾರ್ಥಕ ಪದವಾಯಿತು. 1866ರಲ್ಲಿ, ನ್ಯೂಯಾರ್ಕ್ ಟ್ರಿಬ್ಯೂನ್ ಮತ್ತು ಹ್ಯಾರ್ಪರ್ಸ್ ಮ್ಯಾಗಜೀನ್ ಗಳಿಗಾಗಿ ಬರೆಯುತ್ತಿದ್ದ ಯುದ್ಧ ಸುದ್ಧಿಗಾರ ಜೂನಿಯಸ್ ಹೆನ್ರಿ ಬ್ರೌನೆಯವರು, "ಬೋಹೀಮಿಯನ್" ಪತ್ರಿಕೋದ್ಯಮಿಗಳು, ಅವರಂತೆ ಮತ್ತು ಯುದ್ಧದ ವರ್ಷಗಳಲ್ಲಿ ಅವರು ಎದುರಿಸಿದಂತಹ ಕೆಲವು ಅಸಡ್ಡೆ ಮಹಿಳೆಯರು ಮತ್ತು ಮುಂದಾಲೋಚನೆಯಿಲ್ಲದ ಗಂಡಸರಂತೆ ಎಂದು ವಿವರಿಸಿದ್ದಾರೆ. ಸ್ಯಾನ್ ಫ್ರಾನ್ಸಿಸ್ಕೊ ಪತ್ರಿಕೋದ್ಯಮಿ ಬ್ರೆಟ್ ಹ್ಯಾರ್ಟೆ, 1861 ರಲ್ಲಿ ಬಂಗಾರದ ಯುಗ ದಲ್ಲಿ "ಬೋಹೀಮಿಯನ್" ಎಂದು ಮೊದಲು ಬರೆದರು. ಈ ಪಾತ್ರದೊಂದಿಗೆ, ಅವರ 1867 ರಲ್ಲಿ ಪ್ರಕಟಿಸಲಾದ ಬೋಹೀಮಿಯನ್ ಪೇಪರ್ ಎಂಬ ಪುಸ್ತಕದಲ್ಲಿ ಅತ್ಯಂತ ಹೆಚ್ಚು ಮಾಹಿತಿಯನ್ನು ಪ್ರಕಟಿಸುವ ಮೂಲಕ ಟೀಕೆಗೆ ಗುರಿಯಾದರು. ಹ್ಯಾರ್ಟೆ ,"ಬೋಹೆಮಿಯವನ್ನು ಎಂದಿಗೂ ಭೌಗೋಳಿಕವಾಗಿ ಗುರುತಿಸಿರಲಿಲ್ಲ, ಆದರೆ ಯಾವುದೇ ಸ್ವಚ್ಛವಾದ ದಿನ ಸೂರ್ಯ ಮುಳುಗುವಾಗ, ನೀವು ಟೆಲಿಗ್ರಾಫ್ ಹಿಲ್ಸ್ ಅನ್ನು ಹತ್ತಿದರೆ, ನೀವು ಅದರ ಮನೋಹರ ಕಣಿವೆಗಳನ್ನು ಮತ್ತು ಪಶ್ಚಿಮದಲ್ಲಿ ಹೊಳೆಯುತ್ತಿರುವ ಮೋಡದಿಂದ ಆವೃತವಾದ ಬೆಟ್ಟಗಳನ್ನು ನೋಡಬಹುದು..." ಎಂದು ಬರೆದಿದ್ದಾರೆ. 1867 ರಲ್ಲಿ ಮಾರ್ಕ್ ಟ್ವ್ಯೇನ್ ಅವರನ್ನು ಮತ್ತು ಚಾಲ್ಸ್ ವರೆನ್ ಸ್ಟಾಡಾರ್ಡ್ ರವರನ್ನು ಬೋಹೀಮಿಯನ್ ವರ್ಗಕ್ಕೆ ಸೇರಿಸಿಕೊಂಡರು. 1872 ರ ಹೊತ್ತಿಗೆ, ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಸಾಂಸ್ಕೃತಿಕ ಅನ್ವೇಷಣೆಗಾಗಿ ಸೇರುತ್ತಿದ್ದ ಪತ್ರಿಕೋದ್ಯಮಿಗಳ ಮತ್ತು ಕಲಾವಿದರ ಗುಂಪು ಒಂದು ಹೆಸರಿಗಾಗಿ ಸಮಾಲೋಚಿಸುತ್ತಿದ್ದಾಗ, "ಬೋಹೀಮಿಯನ್" ಪದವನ್ನು ಪ್ರಧಾನವಾಗಿ ಆರಿಸಲಾಯಿತು. ಅಲ್ಲದೇ ಬೋಹೀಮಿಯನ್ ಕ್ಲಬ್ ಹುಟ್ಟಿಕೊಂಡಿತು. ಕ್ಲಬ್ ಅನ್ನು ಸ್ಥಾಪಿಸಿದ ಮತ್ತು ಯಶಸ್ವಿಯಾದ ಸದಸ್ಯರು, ಅವರ ಸಮುದಾಯದ ಆಧಾರವಾಗಿದ್ದವರು, ಗೌರವಾನ್ವಿತ ಸಂಸಾರಸ್ಥರು , ಅವರಂತಹ ಭೋಜನ ಪ್ರಿಯರು, ಕ್ರೀಡಾಪಟು ಮತ್ತು ಲಲಿತಕಲೆಗಳ ಮೆಚ್ಚುಗರನ್ನು ಅವರ ಕ್ಲಬ್ ಗೆ ಸೇರಿಸಿಕೊಳ್ಳಲು ಬೋಹೀಮಿಯನಿಸಂ ಅನ್ನು ಅವರದೇ ರೀತಿಯಲ್ಲಿ ಮರು ವ್ಯಾಖ್ಯಾನಿಸಿದರು. ಕ್ಲಬ್ ನ ಸದಸ್ಯರು ಮತ್ತು ಜಾರ್ಜ್ ಸ್ಟರ್ಲಿಂಗ್ ಎಂಬ ಕವಿ ಈ ಮರು ವ್ಯಾಖ್ಯಾನವನ್ನು ಕುರಿತು ಕೆಳಕಂಡಂತೆ ಪ್ರತಿಕ್ರಿಯಿಸಿದ್ದಾರೆ: ಅವರ ಆಶಯಗಳನ್ನು ಹೊರತುಪಡಿಸಿ, ಸ್ಟರ್ಲಿಂಗ್ ಬೋಹೀಮಿಯನ್ ಕ್ಲಬ್ ನೊಂದಿಗೆ ಅತ್ಯಂತ ನಿಕಟವಾದ ಸಂಬಂಧವನ್ನು ಹೊಂದಿದ್ದರು. ಅಲ್ಲದೇ ಬೋಹೀಮಿಯನ್ ಗ್ರೋ ನಲ್ಲಿ ಏರ್ಪಡುತ್ತಿದ್ದ ಕುಡಿತದ ಕೂಟದಲ್ಲಿ ಕಲಾವಿದರು ಮತ್ತು ಕೈಗಾರಿಕೋದ್ಯಮಿಗಳೊಂದಿಗೆ ಭಾಗವಾಗಿಸುತ್ತಿದ್ದರು. ಆಸ್ಕರ್ ಫರ್ಡಿನ್ಯಾಂಡ್ ಟೆಲ್ಗ್ ಮನ್ ಮತ್ತು ಜಾರ್ಜ್ ಫೈಡ್ರಿಕ್ ಕ್ಯಾಮೆರಾನ್ ದಿ ಬೋಹೀಮಿಯನ್ ಎಂಬ ಹಾಡನ್ನು 1889 ರಲ್ಲಿ ಒಪೇರದಲ್ಲಿ ನಡೆದ ಲಿಯು, ದಿ ರಾಯಲ್ ಕ್ಯಾಡೆಟ್ ನಾಟಕಕ್ಕಾಗಿ ಬರೆದಿದ್ದಾರೆ. ತುಂಟತನದ ಅಮೇರಿಕನ್ ಬರಹಗಾರ ಮತ್ತು ಬೋಹೀಮಿಯನ್ ಕ್ಲಬ್ ಸದಸ್ಯರಾದ ಗೆಲೆಟ್ ಬರ್ಗೆಸ್ ಎಂಬುವವರು "ಬ್ಲರ್ಬ್" ಎಂಬ ಪದವನ್ನು ಸೃಷ್ಟಿಸಿ, ಈ ಪದಕ್ಕೆ ಬೋಹೆಮಿಯ ಒಂದು ಅಪರೂಪವಾದ ಸ್ಥಳ ಎಂಬ ವಿವರಣೆ ನೀಡಿದರು: ನ್ಯೂಯಾರ್ಕ್ ನಗರದಲ್ಲಿ, ರಾಫೆಲ್ ಜೋಸೆಫಿ ಎಂಬ ಪಿಯಾನೋವಾದಕ, ರೂಬಿನ್ ಗೋಲ್ಡ್ ಮಾರ್ಕ್ ನಂತಹ ಸ್ನೇಹಿತರೊಡನೆ ಸೇರಿ 1907 ರಲ್ಲಿ ಸಂಗೀತಗಾರರ ಸಂಘಟನೆಯನ್ನು ನಿರ್ಮಿಸಿದರು. ಇದನ್ನು "ದಿ ಬೋಹೀಮಿಯಯನ್ಸ್ (ನ್ಯೂಯಾರ್ಕ್ ಸಂಗೀತಗಾರರ' ಕ್ಲಬ್ )" ಎಂದು ಕರೆಯಲಾಯಿತು. == ಜನರು (ಸಾರ್ವಜನಿಕರು) == ಈ ಪದವನ್ನು ಅನೇಕ ಕಲಾತ್ಮಕ ಅಥವಾ ಶೈಕ್ಷಣಿಕ ಸಮುದಾಯಗಳೊಂದಿಗೆ ಸೇರಿಸಲಾಯಿತು. ಅಲ್ಲದೇ ಈ ಪದವನ್ನು ಅಂತಹ ಜನರ ಮತ್ತು ಪರಿಸರದ ಅಥವಾ ಸಂದರ್ಭವನ್ನು ಸೂಚಿಸುವ ಸಾಮಾನ್ಯ ಗುಣವಾಚಕವಾಗಿ ಬಳಸಲಾಯಿತು: ಬೋಹೀಮಿಯನ್ (ಬೋಹೊ —ಅನೌಪಚಾರಿಕ) ಪದವನ್ನು ಅಮೇರಿಕದ ಕಾಲೇಜು ಪದಕೋಶದಲ್ಲಿ , "ನೈತಿಕ ವರ್ತನೆಯ ಬಗೆಗಿನ ಸಾಂಪ್ರದಾಯಿಕ ನಿಯಮಗಳಿಗೆ ಬೆಲೆಕೊಡದಂತೆ ಬದುಕುವ ಮತ್ತು ಕಾರ್ಯನಿರ್ವಹಿಸುವ ಕಲಾತ್ಮಕ ಮತ್ತು ಬೌದ್ಧಿಕ ಒಲವನ್ನು ಹೊಂದಿರುವ ವ್ಯಕ್ತಿ" ಎಂದು ವ್ಯಾಖ್ಯಾನಿಸಲಾಗಿದೆ. ಕಳೆದ 150 ವರ್ಷಗಳ ಯುರೋಪಿನ ಮತ್ತು ಅಮೇರಿಕದ ಅನೇಕ ಪ್ರಸಿದ್ಧ ವ್ಯಕ್ತಿಗಳು ಬೋಹೀಮಿಯನ್ ಪ್ರತಿಸಂಸ್ಕೃತಿಗೆ ಸೇರಿದ್ದರು. ಅಲ್ಲದೇ ಯಾವುದೇ ವ್ಯಾಪಕ 'ಬೋಹೀಮಿಯಯನ್ ಗಳ ಪಟ್ಟಿಯು' ಬೇಸರಹಿಡಿಸುವಷ್ಟು ದೊಡ್ದದಾಗಿದೆ. ಬೋಹೀಮಿಯನಿಸಂ ಅನ್ನು, ಹಾನರೆ ದೆ ಬ್ಯಾಲ್ಜಾಕ್ ನಂತಹ ಕೆಲವು ಮಧ್ಯಮವರ್ಗದ ಬರಹಗಾರರು ಕೂಡ ಒಪ್ಪಿಕೊಂಡಿದ್ದಾರೆ. ಆದರೆ ಬಹುಪಾಲು ಸಂಪ್ರದಾಯಶೀಲ ಸಾಂಸ್ಕೃತಿಕ ವಿಮರ್ಶಕರು ಬೋಹೀಮಿಯನ್ ಜೀವನ ಪದ್ಧತಿಯನ್ನು ಕ್ಷಮಿಸಲಿಲ್ಲ. ದಿ ನ್ಯೂಯಾರ್ಕ್ ಟೈಮ್ಸ್ ನ ಅಂಕಣ ಬರಹಗಾರ ಡೇವಿಡ್ ಬ್ರೂಕ್ಸ್, ಮೇಲ್ವರ್ಗದ ಅಮೇರಿಕನ್ನರ ಬಹುಪಾಲು ಸಾಂಸ್ಕೃತಿಕ ಲಕ್ಷಣವೇ ಬೋಹೀಮಿಯನ್ ಆಗಿದೆ, ಈ ಪದ "ಬುರ್ ಷ್ವಾ ಬೋಹೀಮಿಯಯನ್ಸ್" ಅಥವಾ "ಬೊಬೊಸ್ ಎಂಬ ಅಸಂಗತ ಪದಗಳ ಜೋಡಣೆಯಿಂದ ಹುಟ್ಟಿದೆ ಎಂದು ಒತ್ತಿಹೇಳಿದ್ದಾರೆ." ದಿ ಬಾಂಬ್ ಶೆಲ್ ಮ್ಯಾನ್ಯೂಲ್ ಆಫ್ ಸ್ಟೈಲ್ ನ ಕರ್ತೃವಾದ ಲಾರೆನ್ ಸ್ಟೋವರ್, ಬೋಹೀಮಿಯನ್ ಅನ್ನು ಐದು ವಿಭಿನ್ನ ಮನೋರೂಢಿಯಾಗಿ/ಶೈಲಿಗಳಾಗಿ ಅವರ ಪುಸ್ತಕವಾದ ಬೋಹೀಮಿಯನ್ ಮ್ಯಾನಿಫೆಸ್ಟೊ: ಅ ಫೀಲ್ಡ್ ಗೈಡ್ ಟು ಲೀವಿಂಗ್ ಆನ್ ದಿ ಎಡ್ಜ್ ನಲ್ಲಿ ವಿಂಗಡಿಸಿದ್ದಾರೆ. ಸ್ಟೋವರ್ ರವರು ಬೋಹೀಮಿಯನ್ ಅನ್ನು "ಪಕ್ಷಿಗಳ ಜಾತಿಗಳಂತೆ ಸುಲಭವಾಗಿ ವರ್ಗೀಕರಿಸಲಾಗುವುದಿಲ್ಲ" , ಅವು ವ್ಯತ್ಯಯಗಳು ಮತ್ತು ಮಿಶ್ರಜಾತಿಗಳಾಗಿವೆ ಎಂದು ಬರೆದಿದ್ದಾರೆ. ಐದು ವಿಧಗಳು ಕೆಳಕಂಡಂತಿವೆ: ನೋವಿಯೊ: ಸಮಕಾಲೀನ ಸಂಸ್ಕೃತಿಯೊಂದಿಗೆ ಸಾಂಪ್ರದಾಯಿಕ ಬೋಹೀಮಿಯನಿಸಂ ಅನ್ನು ಸೇರಿಕೊಳ್ಳಲು ಪ್ರಯತ್ನಿಸಿದಂತಹ ಹಣವುಳ್ಳ ಬೋಹೀಮಿಯಯನ್ ಗಳು ಜಿಪ್ಸಿ: ಹಿಂದಿನ ರೋಮಾಂಚಕಾರಿ ಯುಗಕ್ಕಾಗಿ ಭಾವುಕತೆಯೊಂದಿಗಿನ ಅಲೆಮಾರಿಗಳು, ನಿಯೊ ಹಿಪಿಗಳು, ಮತ್ತು ಇತರರು ಬೀಟ್: ಇವರು ಕೂಡ ಅಲೆಮಾರಿಗಳು, ಆದರೆ ಸುಖವಾದಿಗಳಲ್ಲ ಮತ್ತು ಕಲೆಗೆ ಗಮನ ಹರಿಸಿದಂತವರು ಸೆನ್: "ಬೀಟ್ ಗಿಂತ ಹಿಂದಿನವರಾಗಿದ್ದು," ಕಲೆಗಿಂತ ಹೆಚ್ಚಾಗಿ ಆಧ್ಯಾತ್ಮಿಕತೆಯ ಕಡೆ ಒಲವು ತೋರಿಸಿದ್ದರು ಡ್ಯಾಂಡಿ: ಹಣವಿಲ್ಲದವರು, ಆದರೆ ಅಲ್ಕಹಾಲ್ ನ ಬ್ರಾಂಡ್ ಗಳಂತಹ ಅತ್ಯಂತ ದುಬಾರಿಯಾದ ಅಥವಾ ವಿರಳ ವಸ್ತುಗಳನ್ನು ಕೊಂಡುಕೊಂಡು ಹಣವುಳ್ಳವರಂತೆ ತೋರಿಸಿಕೊಳ್ಳುವವರು. ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ, ಬೋಹೀಮಿಯನ್ ಪ್ರವೃತ್ತಿಯನ್ನು 1960ರ ಹಿಪಿ ಪ್ರತಿಸಂಸ್ಕೃತಿ ಯಲ್ಲಿ ನೋಡಬಹುದಾಗಿದೆ(ಇದರ ಮಾಹಿತಿಯನ್ನು ಬೀಟ್ ಪೀಳಿಗೆಯ ಮತ್ತು ವಿಲಿಯಂ . ಬರೋಗ್ಸ್, ಅಲೆನ್ ಗಿನ್ಸ್ ಬರ್ಗ್ , ಮತ್ತು ಜ್ಯಾಕ್ ಕೆರಾಕ್ ನಂತಹ ಬರಹಗಾರರು ನೀಡಿದ್ದಾರೆ). ರೇನ್ ಬೋ ಸಮೂಹಗಳು ಕೂಡ ಪ್ರಪಂಚದಾದ್ಯಂತ ವ್ಯಕ್ತಪಡಿಸಲಾದ ಮತ್ತೊಂದು ಸಮಕಾಲೀನ ಬೋಹೀಮಿಯನ್ ಪ್ರವೃತ್ತಿಯಂತೆ ಕಂಡುಬರುತ್ತವೆ. == ಗತಕಾಲದಲ್ಲಿ ಬೋಹೀಮಿಯನ್ ಸಮುದಾಯಗಳು == ಬೋಹೆಮಿಯ ಪದವನ್ನು ವಿಸ್ತಿರಿಸುವ ಮೂಲಕ ನೋಡಿದಾಗ ಯಾವುದೇ ಸ್ಥಳದಲ್ಲಿ ಒಬ್ಬ ವ್ಯಕ್ತಿ ಕೀಳಾಗಿ ಬದುಕುತ್ತಿದ್ದಾನೆ, ಕಾರ್ಯನಿರ್ವಹಿಸುತ್ತಿದ್ದಾನೆ, ಮತ್ತು ಸಂಪ್ರದಾಯಬದ್ಧವಾಗಿ ವರ್ತಿಸುತಿಲ್ಲ ಎಂಬ ಅರ್ಥವನ್ನು ಕೊಡುತ್ತದೆ. ಹತ್ತೊಂಭತ್ತನೆ ಶತಮಾನದಲ್ಲಿ ಮತ್ತು ಇಪ್ಪತ್ತನೆ ಶತಮಾನದ ಪೂರ್ವಾರ್ಧದಲ್ಲಿ ಅನೇಕ ನಗರಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳು ಬೋಹೀಮಿಯನಿಸಂ ಗೆ ಸೇರಿಕೊಂಡವು: ಯುರೋಪ್ ನಲ್ಲಿ: ಪ್ಯಾರಿಸ್ ನಲ್ಲಿ ಮಾಂಟ್ ಮಾರ್ಟ್ರೆ ಮತ್ತುಮಾಂಟ್ ಪ್ಯಾರನೇಸ್;ಲಂಡನ್ ನಲ್ಲಿ ಚೆಲ್ಸಿಯ, ಫಿಟ್ಜೊರ್ವಿಯ, ಮತ್ತು ಸೊಹೊ ; ಮ್ಯುನಿಕ್ ನಲ್ಲಿ ಸ್ಚವ್ಯಾಬಿಂಗ್; ಬೆಲ್ ಗ್ರೇಡ್ ನಲ್ಲಿ ಸ್ಕ್ಯಾಡರ್ಲಿಜಾ ; ಬುಡಪೆಸ್ಟ್ ನಲ್ಲಿ ಟ್ಯಾಬನ್. ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ:ನ್ಯೂಯಾರ್ಕ್ ನಗರ ದಲ್ಲಿ ಗ್ರೀನ್ ವಿಚ್ ವಿಲೇಜ್ ಮತ್ತು ಟಿಬ್ಯುರಾನ್, ಕ್ಯಾಲಿಫೋರ್ನಿಯ. ಆಸ್ಟ್ರೇಲಿಯಾ: ಪಾಟ್ಸ್ ಪಾಯಿಂಟ್, ಸಿಡ್ನಿ. == ಇವನ್ನೂ ನೋಡಿ == == ಉಲ್ಲೇಖಗಳು == === ಟಿಪ್ಪಣಿಗಳು === === ಗ್ರಂಥಸೂಚಿ === , (1964). . , 1803–1867 ( B0016A7CJA .). : . Graña, César (1964). : . : . 0465007368. ಪ್ಯಾರಿ, ಅಲ್ಬರ್ಟ್. (2005.) ಗ್ಯಾರೆಟ್ಸ್ ಅಂಡ್ ಪ್ರಿಟೆಂಡರ್ಸ್: ಅ ಹಿಸ್ಟ್ರಿ ಆಫ್ ಬೋಹೀಮಿಯನಿಸಂ ಇನ್ ಅಮೇರಿಕ , ಕಾಸಿಮೊ, . 159605090X , (2000). : . & . 0805048472. , (2002). : . . 1860647820. === ಹೆಚ್ಚಿನ ಓದಿಗಾಗಿ === , (1999). : , , , 1830-1930. . 978-0801860638. == ಬಾಹ್ಯ ಕೊಂಡಿಗಳು == ಬೋಹೀಮಿಯನಿಸಂ ಅಂಡ್ ಕೌಂಟರ್- ಕಲ್ಚರ್ 2010-11-10 ವೇಬ್ಯಾಕ್ ಮೆಷಿನ್ ನಲ್ಲಿ.